ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.

ಸಂಪರ್ಕ ಮಾಹಿತಿ
ಫೋನ್

+91 96117 19922

ಇಮೇಲ್

hrstrust9@gmail.com

ಸ್ಥಳ

ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122

img
ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ (ರಿ) ಬಗ್ಗೆ

ಟ್ರಸ್ಟಿನ ಉದ್ದೇಶ

ಸಮಾಜಸೇವೆ ಸಮಾಜದ ಒಟ್ಟಾರೆ ಹಿತಕ್ಕಾಗಿ, ಸ್ವಾರ್ಥವಿಲ್ಲದೆ ಮಾಡುವ ಸೇವೆ. ಮಾನವ ಸೇವೆಯೇ ಮಾಧವ ಸೇವೆ ಎಂಬ ಮಾತಿನಂತೆ ದೀನ-ದುರ್ಬಲರ, ಹತಭಾಗ್ಯರ ಸೇವೆ ಮಾಡುವ ಮೂಲಕ ದೇವರನ್ನು ಕಾಣುವ ಮಹದಾಸೆ ಹಿಂದೂ ಸೇವಾಶ್ರಮ ಟ್ರಸ್ಟ್‌ನದ್ದಾಗಿದೆ. ಇದು ಮಾನವೀಯತೆ, ದಯೆ, ಸಹಾನುಭೂತಿ ಮತ್ತು ಪರೋಪಕಾರದ ಮೇಲೆ ಆಧಾರಿತವಾದ ಕಾರ್ಯವಾಗಿದೆ.

ಸಮಾಜದಲ್ಲಿ ಬಡವರು, ಅನಾಥರು, ವೃದ್ಧರು, ಅಶಕ್ತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಜೀವನಮಟ್ಟವನ್ನು ಉತ್ತಮಗೊಳಿಸುವುದೇ ಸಮಾಜಸೇವೆಯ ಮುಖ್ಯ ಉದ್ದೇಶ.

ಸಮಾಜಸೇವೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬಡವರಿಗೆ ಆಹಾರ, ವಸತಿ ಮತ್ತು ಶಿಕ್ಷಣ ಒದಗಿಸುವುದು, ರೋಗಿಗಳಿಗೆ ಚಿಕಿತ್ಸಾ ಸಹಾಯ ನೀಡುವುದು, ಅನಾಥ ಮಕ್ಕಳಿಗೆ ಆಶ್ರಯ, ಅಸಹಾಯಕ ವೃದ್ಧರ ಆರೈಕೆ, ಮಹಿಳೆಯರಿಗೆ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸುವುದು ಇತ್ಯಾದಿ ಪ್ರಮುಖ ಉದಾಹರಣೆಗಳು. ಇವುಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ಸಹಾಯವಾಗುತ್ತದೆ ಎಂಬುದು ಟ್ರಸ್ಟ್‌ನ ಬಲವಾದ ನಂಬಿಕೆ.

ಸಮಾಜಸೇವೆಯು ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸುತ್ತದೆ ಮತ್ತು ಸಹಕಾರದ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಇದರ ಜೊತೆಗೆ, ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಮತ್ತು ಸಹಜೀವನವನ್ನು ಬಲಪಡಿಸುತ್ತದೆ.

ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ಹೆಸರಿನಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೋರನಕೊಪ್ಪಲು ಗ್ರಾಮದಲ್ಲಿ ಅಂಕುರಾರ್ಪಣೆಯಾಗಿರುವ ಸಮಾಜಮುಖಿ ಸೇವಾ ಚಟುವಟಿಕೆಗಳು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿವೆ.

ಶುದ್ಧ ಗ್ರಾಮೀಣ ಪರಿಸರದಲ್ಲಿ ತಲೆಎತ್ತಿ ನಿಲ್ಲಲಿರುವ ಈ ಆಶ್ರಮದಲ್ಲಿ ಅನಾಥರು, ಹಿರಿಯರು ಮತ್ತು ಅಬಲೆಯರಿಗೆ ಆರೋಗ್ಯಪೂರ್ಣ ವಾತಾವರಣದಲ್ಲಿ ವಸತಿ, ಆಹಾರ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಕೌಟುಂಬಿಕ ಸೌಲಭ್ಯಗಳನ್ನು ಕಲ್ಪಿಸಿ ನೆಮ್ಮದಿಯ ಜೀವನ ಕಾಣುವಂತೆ ಮಾಡುವುದು ಹಾಗೂ ಆಧ್ಯಾತ್ಮಿಕತೆಯನ್ನು ಎತ್ತಿಹಿಡಿಯುವುದು ಟ್ರಸ್ಟ್ ಮುಖ್ಯ ಉದ್ದೇಶವಾಗಿದೆ.

ಸಮಾಜದ ವಿವಿಧ ವರ್ಗಗಳಿಗೆ ನೆರವಾಗುವ ಉದ್ದೇಶದಿಂದ ಈ ಟ್ರಸ್ಟ್ ಅನಾಥಾಶ್ರಮ, ಅಬಲಾಶ್ರಮ, ವೃದ್ಧಾಶ್ರಮ, ಗೋಶಾಲೆ, ಅನ್ನದಾಸೋಹ ಮಂದಿರ, ಆಧ್ಯಾತ್ಮಿಕ ಕೇಂದ್ರ ಮತ್ತು ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸಲು ಮುಂದಾಗಿದೆ. ಇಂತಹ ಕಾರ್ಯಗಳು ಕೇವಲ ಸೇವೆಯಷ್ಟೇ ಅಲ್ಲ, ಸಮಾಜದಲ್ಲಿ ಸಹಾನುಭೂತಿ, ಸಹಕಾರ ಮತ್ತು ಮಾನವೀಯತೆ ಬೆಳೆಯುವಂತೆ ಮಾಡುವ ಮಹತ್ವದ ಹೆಜ್ಜೆಗಳಾಗಿವೆ.