ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.

ಸಂಪರ್ಕ ಮಾಹಿತಿ
ಫೋನ್

+91 96117 19922

ಇಮೇಲ್

hrstrust9@gmail.com

ಸ್ಥಳ

ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122

img

ಸಸ್ಯ ನರ್ಸರಿ

ಆಶ್ರಮದ ನರ್ಸರಿಯಲ್ಲಿ ಹಲವು ತಳಿಗಳ ಸಸಿಗಳು ಹಾಗೂ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಿ ಹಸಿರು ಸಸ್ಯಕಾಶಿಯನ್ನು ನಿರ್ಮಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನರ್ಸರಿಯಲ್ಲಿ ಔಷಧೀಯ ಗುಣಗಳಿರುವ ಸಸ್ಯಗಳು, ಹೂವಿನ ಗಿಡಗಳು ಮತ್ತು ಹಣ್ಣಿನ ಮರಗಳನ್ನು ಬೆಳೆಯಲಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಗೂ ಸಹಾಯವಾಗುವುದರ ಜೊತೆಗೆ ಆಶ್ರಮದ ನಿವಾಸಿಗಳಿಗೆ ಉದ್ಯೋಗಾವಕಾಶವೂ ಸಿಗುತ್ತದೆ. ಸಸಿಗಳ ಪಾಲನೆ-ಪೋಷಣೆಯ ಮೂಲಕ ಅವರು ಪ್ರಕೃತಿಯೊಂದಿಗೆ ಹತ್ತಿರವಾಗುವ ಅವಕಾಶ ಪಡೆಯುತ್ತಾರೆ. ಹಸಿರು ವಾತಾವರಣವು ಮಾನಸಿಕ ಶಾಂತಿಯನ್ನು ನೀಡುವುದರೊಂದಿಗೆ ಆರೋಗ್ಯಕ್ಕೂ ಒಳಿತು. ಈ ಸಸ್ಯಕಾಶಿಯ ನಿರ್ವಹಣೆಗೆ ನರ್ಸರಿ ಪಾಲನೆಯಲ್ಲಿ ಅನುಭವ ಇರುವ ತಜ್ಞರನ್ನು ನೇಮಿಸಲಾಗುತ್ತದೆ. ಇವರು ಸಸ್ಯಗಳ ಬೆಳವಣಿಗೆ ಬಗ್ಗೆ ಗಮನ ವಹಿಸುವುದಲ್ಲದೆ, ಆಶ್ರಮವಾಸಿಗಳಿಗೂ, ಸ್ಥಳೀಯರಿಗೂ, ಯುವಕರಿಗೂ ಮರಗಳ ಮಹತ್ವ, ಕಾಡಿನ ಮಹತ್ವನ್ನು ಜೊತೆಗೆ ಸಸ್ಯಶಾಸ್ತ್ರದ ಅರಿವನ್ನು ಮೂಡಿಸುತ್ತಾರೆ.ಈ ಸಸ್ಯಕಾಶಿ ಆಶ್ರಮದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತದೆ ಎಂದು ಟ್ರಸ್ಟ್‌ ನಂಬಿದೆ.

ಪ್ರಾತಃಸ್ಮರಣೀಯ ಮಹನೀಯರ ಜಯಂತಿ ಆಚರಣೆ

ಹಿಂದೂ ಸೇವಾಶ್ರಮ ಟ್ರಸ್ಟ್ ಆಶ್ರಯದಲ್ಲಿ ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಆಚರಣೆಗಳು ಮತ್ತು ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಆಶ್ರಮವಾಸಿಗಳಿಗೆ ಚೈತನ್ಯ ತುಂಬುವ ಮಹತ್ವದ ಕಾರ್ಯ ನಡೆಯುತ್ತದೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂತಹ ಹಬ್ಬಗಳ ಜೊತೆಗೆ ವಿವಿಧ ಧರ್ಮಗಳ ಆಚರಣೆಗಳನ್ನು ಕೂಡ ಗೌರವದಿಂದ ನಡೆಸಲಾಗುತ್ತದೆ. ಧರ್ಮಗುರುಗಳು ಮತ್ತು ಮಹನೀಯರ ಜೀವನ ಮೌಲ್ಯಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ಆಶ್ರಮವಾಸಿಗಳಿಗೆ ಪ್ರೇರಣೆಯಾಗುತ್ತವೆ. ಇವುಗಳ ಮೂಲಕ ಏಕತೆ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳು ಬೆಳೆಸಲ್ಪಡುತ್ತವೆ. ಸಂಭ್ರಮದ ವಾತಾವರಣವು ಅವರ ಮನಸ್ಸಿಗೆ ಹರ್ಷ ನೀಡುವುದರೊಂದಿಗೆ ಹೊಸ ಉತ್ಸಾಹವನ್ನು ಉಂಟುಮಾಡುತ್ತದೆ. ಇದಕ್ಕಾಗಿ ವಿವಿಧ ಧಾರ್ಮಿಕ ಸಂಸ್ಥೆಗಳು, ಮಠ-ಮಾನ್ಯಗಳ ಸಂಪನ್ಮೂಲ ವ್ಯಕ್ತಿಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

img
img

ಕುರಿ ಕೋಳಿ ಪಶುಪಕ್ಷಿ ಸಾಕಾಣಿಕೆ

ಆಶ್ರಮದಲ್ಲಿ ಕುರಿ, ಕೋಳಿ, ಮೊಲ ಹಾಗೂ ಇತರ ಪಶು-ಪಕ್ಷಿಗಳ ಸಾಕಣೆ ಕೈಗೊಳ್ಳುವುದು ಆಶ್ರಮವಾಸಿಗಳಿಗೆ ಹಲವು ರೀತಿಯಲ್ಲಿ ಸಹಕಾರಿಯಾಗುತ್ತದೆ. ಈ ಕಾರ್ಯದಿಂದ ಅವರಿಗೆ ಉದ್ಯೋಗಾವಕಾಶ ದೊರೆಯುವುದರ ಜೊತೆಗೆ ಸ್ವಾವಲಂಬನೆ ಬೆಳೆಸಲು ನೆರವಾಗುತ್ತದೆ. ಪಶುಪಾಲನೆಯ ಮೂಲಕ ಹಾಲು, ಮೊಟ್ಟೆ ಮತ್ತು ಇತರ ಉತ್ಪನ್ನಗಳು ದೊರೆಯುತ್ತವೆ, ಇದು ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಪ್ರಾಣಿಗಳೊಂದಿಗೆ ಸಂಪರ್ಕವು ಮಾನಸಿಕ ಶಾಂತಿ ಹಾಗೂ ಸಂತೋಷ ನೀಡುತ್ತದೆ. ಜೀವ ವೈವಿಧ್ಯ ಕಾಪಾಡುವ ಅರಿವು ಹೆಚ್ಚುವುದರಿಂದ ಪರಿಸರದ ಬಗ್ಗೆ ಜಾಗೃತಿ ಮೂಡುತ್ತದೆ. ಈ ರೀತಿಯ ಚಟುವಟಿಕೆಗಳು ಆಶ್ರಮವಾಸಿಗಳ ಜೀವನ ಮಟ್ಟವನ್ನು ಸುಧಾರಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಆಶ್ರಮವಾಸಿಗಳ ಹವ್ಯಾಸಕ್ಕೆ ತಕ್ಕಂತೆ ವಿವಿಧ ಪ್ರಾಣಿ-ಪಕ್ಷಿಗಳ ಪಾಲನೆಯಲ್ಲಿ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಹತಭಾಗ್ಯ ಜನರು ತಾವು ಜೀವನದಲ್ಲಿ ಕಳೆದುಕೊಂಡ ಮನಶ್ಶಾಂತಿ ಮತ್ತು ಜೀವನೋತ್ಸಾಹವನ್ನು ಇಲ್ಲಿ ಮರಳಿ ಪಡೆಯುತ್ತಾರೆ. ಹೀಗೆ ಮನುಷ್ಯ- ಪ್ರಾಣಿ ಸಂಕುಲಗಳ ಸಮನ್ವಯದಿಂದ ಇಡೀ ಆಶ್ರಮದ ವಾತಾವರಣ ಆಹ್ಲಾದಕರವಾಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ.

ರಂಗಶಾಲೆ

ಹಿಂದೂ ಸೇವಾಶ್ರಮ ಟ್ರಸ್ಟ್ ವತಿಯಿಂದ ಅಸಹಾಯಕರಿಗಾಗಿ ವಿಶಿಷ್ಟ ಆಶ್ರಮವನ್ನು ನಿರ್ಮಿಸುವ ಯೋಜನೆ ಶ್ಲಾಘನೀಯವಾಗಿದೆ. ಈ ಆಶ್ರಮದಲ್ಲಿ ಆಶ್ರಯವಿಲ್ಲದವರಿಗೆ ವಾಸಸ್ಥಳ, ಆಹಾರ ಹಾಗೂ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ನಾಟಕ, ಜಾನಪದ ಕಲೆ, ಸಂಗೀತ ಮತ್ತು ನೃತ್ಯ ಶಾಲೆಗಳ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಬೆಳಸುವ ಅವಕಾಶ ಸಿಗುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ಜೀವನದಲ್ಲಿ ವಿನೂತನ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಸಮಾಜದ ಏಳ್ಗೆಗೆ ಮಹತ್ವದ ಪಾತ್ರ ವಹಿಸುತ್ತವೆ. ಈ ಯೋಜನೆ ಅಸಹಾಯಕರ ಬದುಕಿಗೆ ಬೆಳಕಾಗುವಂತಹದ್ದು.

img