ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.
ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122
ವಿಶ್ರಾಂತಿ ಮಂದಿರ
ಹಿಂದೂ ಧಾರ್ಮಿಕ ಮತ್ತು ತೀರ್ಥಯಾತ್ರಾ ಸಂಪ್ರದಾಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವು ಭಕ್ತರಿಗೆ ದೈವಿಕ ಅನುಭವದೊಂದಿಗೆ ಭೌತಿಕ ಸೌಕರ್ಯವನ್ನು ಒದಗಿಸುತ್ತದೆ ದೂರದ ಊರುಗಳಿಂದ ಬರುವ ತೀರ್ಥಯಾತ್ರಿಕರಿಗೆ, ಭಕ್ತರಿಗೆ ಸುರಕ್ಷಿತ ಮತ್ತು ಕೈಗೆಟುಕುವ ದರದಲ್ಲಿ ವಸತಿ ಸೌಕರ್ಯವನ್ನು ಒದಗಿಸುತ್ತವೆ.
ಆಶ್ರಮದ ಆವರಣದಲ್ಲಿಯೇ ಇರುವುದರಿಂದ, ಭಕ್ತರು ಶಾಂತಿಯುತ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣದಲ್ಲಿ ಉಳಿಯಲು ಸಹಾಯವಾಗುತ್ತದೆ.
ಹೆಚ್ಚಿನ ವಿಶ್ರಾಂತಿ ಗೃಹಗಳು ಸರಳವಾದ ಆದರೆ ಅಗತ್ಯವಾದ ಸೌಲಭ್ಯಗಳನ್ನು (ನೀರು, ಹಾಸಿಗೆ, ಶೌಚಾಲಯ) ಒದಗಿಸುತ್ತವೆ.
ವಿಶೇಷ ಪೂಜೆಗಳು, ಹಬ್ಬಗಳು ಮತ್ತು ಜಾತ್ರೆಗಳ ಸಮಯದಲ್ಲಿ ಸಾವಿರಾರು ಭಕ್ತರು ಬರುವಾಗ ಈ ವಿಶ್ರಾಂತಿ ಗೃಹಗಳು/ಧರ್ಮಶಾಲೆಗಳು ಆಶ್ರಯ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.
ಇದು ಸಮುದಾಯ ಸೇವೆ ಮತ್ತು ಅತಿಥಿ ಸತ್ಕಾರದ ಅತಿಥಿ ದೇವೋ ಭವ ಸಂಪ್ರದಾಯವನ್ನು ಎತ್ತಿಹಿಡಿಯುತ್ತದೆ.
ದೇವಾಲಯದ ವಿಶ್ರಾಂತಿ ಗೃಹಗಳು ಭಕ್ತರ ದೈಹಿಕ ಸುಸ್ತು ಕಡಿಮೆ ಮಾಡಿ, ಮಾನಸಿಕವಾಗಿ ದೇವರ ದರ್ಶನಕ್ಕೆ ಸಿದ್ಧರಾಗಲು ನೆರವಾಗುತ್ತವೆ.
ಪುಣ್ಯಕ್ಷೇತ್ರ
ದೇವಾಲಯಗಳು ಕೇವಲ ಪೂಜಾಸ್ಥಳಗಳಲ್ಲದೆ, ನಮ್ಮ ಸಂಸ್ಕೃತಿ, ಕಲೆ, ಇತಿಹಾಸ ಮತ್ತು ಆಧ್ಯಾತ್ಮಿಕತೆಯ ಜೀವಾಳಗಳಾಗಿವೆ.
ಇವು ಮಾನವ ಮತ್ತು ದೈವತ್ವದ ನಡುವಿನ ಕೊಂಡಿಯಾಗಿ, ಮನಸ್ಸಿನ ಶಾಂತಿ, ಧನಾತ್ಮಕ ಶಕ್ತಿ, ಸಾಮಾಜಿಕ ಒಗ್ಗಟ್ಟು ಮತ್ತು ಶಿಕ್ಷಣದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ದೇವಾಲಯಗಳನ್ನು ಹೆಚ್ಚಾಗಿ ಕಾಂತೀಯ ಮತ್ತು ವಿದ್ಯುತ್ ತರಂಗಗಳು ಹೆಚ್ಚಿರುವ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಗರ್ಭಗೃಹದಲ್ಲಿರುವ ದೈವಿಕ ಮೂರ್ತಿ ಮತ್ತು ನಿರಂತರ ಪೂಜಾ ವಿಧಿ-ವಿಧಾನಗಳು ಸಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ, ಇದು ಭಕ್ತರಿಗೆ ಮಾನಸಿಕ ನೆಮ್ಮದಿ ನೀಡುತ್ತದೆ. ದೇವಾಲಯಗಳು ಮನುಷ್ಯನ ಆಂತರಿಕ ಬೆಳವಣಿಗೆ ಮತ್ತು ಸಮಾಜದ ಸಾಂಸ್ಕೃತಿಕ ಉಳಿವಿಗಾಗಿ ಅತ್ಯಗತ್ಯವಾಗಿವೆ.
ಈ ನಿಟ್ಟಿನಲ್ಲಿ ಹಿಂದೂ ರಾಷ್ಟ್ರಿಯ ಸೇವಾಶ್ರಮವು.
ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಹಾಗೂ ಉಪದೇವತೆಗಳ ದೇವಾಲಯವನ್ನು ನಿರ್ಮಿಸುತ್ತಿದೆ. ದೇವಾಲಯವು ಆಧ್ಯಾತ್ಮಿಕ ಶಾಂತಿ ಮತ್ತು ಮನಶಾಂತಿಯನ್ನು ಪಡೆಯಲು ಸಹಾಯಕವಾಗುತ್ತದೆ.
ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸಲು ಮತ್ತು ಧಾರ್ಮಿಕ ಮೌಲ್ಯಗಳನ್ನು ಉಳಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಸದುದ್ದೇಶ ಮತ್ತು ಸಾತ್ವಿಕತೆಯನ್ನು ಹೆಚ್ಚಿಸುತ್ತವೆ.
ಅನ್ನದಾಸೋಹ ಮಂದಿರ
ಹಸಿದವರಿಗೆ, ಭಕ್ತರಿಗೆ ಮತ್ತು ಯಾತ್ರಿಕರಿಗೆ ಉಚಿತವಾಗಿ ಗುಣಮಟ್ಟದ ಆಹಾರವನ್ನು ಒದಗಿಸುವ ಪವಿತ್ರ ಸ್ಥಳವಾಗಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ, ಹಿಂದೂ ಧರ್ಮದಲ್ಲಿ ಅನ್ನದಾನವನ್ನು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ಎಂದು ಪರಿಗಣಿಸಲಾಗುತ್ತದೆ.
ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಆಹಾರ ನೀಡಲಾಗುತ್ತದೆ. ಇದು "ವಸುಧೈವ ಕುಟುಂಬಕಂ" ಎಂಬ ತತ್ವವನ್ನು ಎತ್ತಿಹಿಡಿಯುತ್ತದೆ.
ಸ್ವಚ್ಛತೆ ಮತ್ತು ಭಕ್ತಿಯಿಂದ ಸಿದ್ಧಪಡಿಸಿದ ಪೌಷ್ಟಿಕ ಆಹಾರವನ್ನು ಭಕ್ತರಿಗೆ ಬಡಿಸಲಾಗುತ್ತದೆ. ಅನ್ನದಾನವು ಅನ್ನಪೂರ್ಣ ದೇವಿಯ ಆರಾಧನೆಗೆ ಸಂಬಂಧಿಸಿದ್ದು, ಆಹಾರದ ಅಭಾವ ನೀಗಿಸಲು ಮತ್ತು ಸಮೃದ್ಧಿಗಾಗಿ ಈ ಸೇವೆ ಮಾಡಲಾಗುತ್ತದೆ.
ಅನ್ನದಾಸೋಹ ಮಂದಿರವು ಕೇವಲ ಹಸಿವು ನೀಗಿಸುವ ಸ್ಥಳವಲ್ಲ, ಬದಲಾಗಿ ಭಕ್ತಿ, ಸೇವೆ ಮತ್ತು ಮಾನವೀಯತೆಯ ಸಂಕೇತವಾಗಿದೆ.
ಅನ್ನದಾಸೋಹ ಮಂದಿರವು ಹಸಿದವರಿಗೆ ಉಚಿತವಾಗಿ ಆಹಾರ ನೀಡುವುದರ ಮೂಲಕ ಅನ್ನಪೂರ್ಣೇಶ್ವರಿ ದೇವಿಯ ಆರಾಧನೆಯಾಗಿ, ಭಕ್ತರಲ್ಲಿ ಸೇವಾ ಮನೋಭಾವನೆಯನ್ನು ಮೂಡಿಸುತ್ತದೆ.
ಇದು ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಸಮಾನ ಪ್ರಸಾದ ನೀಡಿ, ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಪರಸ್ಪರ ಸಹಕಾರವನ್ನು ಉತ್ತೇಜಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ.
ಆಧ್ಯಾತ್ಮ ಕೇಂದ್ರಗಳು
ಜನರು ಜೀವನದಲ್ಲಿ ಶಾಂತಿ-ನೆಮ್ಮದಿ, ಸಂತೃಪ್ತಿಯನ್ನು ಕಾಣಲು ಧ್ಯಾನಮಂದಿರ, ಯೋಗಮಂದಿರ, ಗುರುಮಂದಿರ, ಆಧ್ಯಾತ್ಮಿಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಆಧ್ಯಾತ್ಮಿಕ ಕೇಂದ್ರಗಳು ಮನಸ್ಸಿನ ಶಾಂತಿ, ಧ್ಯಾನ, ಯೋಗ ಮತ್ತು ಜ್ಞಾನಾರ್ಜನೆಗೆ ಮೀಸಲಾದ ತಾಣಗಳಾಗಿವೆ.
ನೋವು ಮತ್ತು ಹತಾಶೆಗಳಿಂದ ಮುಕ್ತಿ ಪಡೆದು ಮಾನಸಿಕ ಶಾಂತಿಯನ್ನು ಕಂಡುಕೊಳ್ಳಲು ಮಂದಿರಗಳು ಸಹಾಯ ಮಾಡುತ್ತವೆ. ಇಂತಹ ಸ್ಥಳಗಳು ಮನಸ್ಸನ್ನು ಶುದ್ಧೀಕರಿಸಿ, ಭಕ್ತಿ ಮತ್ತು ಶ್ರದ್ಧೆಯನ್ನು ಹೆಚ್ಚಿಸುತ್ತವೆ.
ಈ ನಿಟ್ಟಿನಲ್ಲಿ ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ಗುರುಮಂದಿರ, ಧ್ಯಾನಮಂದಿರ, ಯೋಗಮಂದಿರ, ಪ್ರಾರ್ಥನಾ ಮಂದಿರದಂತಹ ಆಧ್ಯಾತ್ಮ ಕೇಂದ್ರಗಳನ್ನು ಜನಗಳ ಅನುಕೂಲಕ್ಕಾಗಿ ಟ್ರಸ್ಟ್ ನಿರ್ಮಿಸಲಿದೆ.