ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.
ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122
ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ನ ಅಬಲಾಶ್ರಮವು ಅನಾಥ ಹೆಣ್ಣುಮಕ್ಕಳಿಗೆ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆಯ ಜೊತೆಗೆ ಆತ್ಮಸ್ಥೈರ್ಯ ನೀಡುವ ಕೇಂದ್ರವಾಗಲಿದೆ. ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸ್ವಾಭಿಮಾನಕ್ಕೆ ಮಹತ್ವ ನೀಡಬೇಕಾದ ಅವಶ್ಯಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂತಹ ಆಶ್ರಮಗಳು ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತವೆ. ಶಿಕ್ಷಣ, ಉದ್ಯೋಗ ತರಬೇತಿ ಮತ್ತು ಮಾನಸಿಕ ಬೆಂಬಲದ ಮೂಲಕ ಅವರಿಗೆ ಸ್ವಾವಲಂಬನೆಯ ದಾರಿ ತೋರಿಸಲಾಗುತ್ತದೆ.
ಅಬಲಾಶ್ರಮವು ಮಹಿಳೆಯರಿಗೆ ಕೇವಲ ಆಶ್ರಯ ಮಾತ್ರವಲ್ಲದೆ, ಹೊಸ ಬದುಕನ್ನು ಕಟ್ಟಿಕೊಳ್ಳಲು ದಾರಿ ತೋರುವ ತಾಣವಾಗಿದೆ.
ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ಆಸರೆಯಿಲ್ಲದ ಮಹಿಳೆಯರು ಮುಖ್ಯವಾಗಿ ಸಂಕಷ್ಟದಲ್ಲಿರುವ ಮಹಿಳೆಯರು, ವಿಧವೆಯರು, ಅನಾಥರು, ಸಾಮಾಜಿಕವಾಗಿ ಶೋಷಣೆಗೊಳಗಾದ ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಅಸಹಾಯಕರಿಗೆ ಸೂಕ್ತ ಆಶ್ರಯತಾಣವಾಗಲಿದೆ ಈ ಆಶ್ರಮ.
ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆ ಒದಗಿಸುವುದು. ಅನಾಥ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ.
ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ, ಟೈಪಿಂಗ್, ಕಂಪ್ಯೂಟರ್ ಮುಂತಾದ ವೃತ್ತಿಪರ ತರಬೇತಿ ನೀಡುವುದು. ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಆತ್ಮವಿಶ್ವಾಸ ಮತ್ತು ಆರ್ಥಿಕ ಶಕ್ತಿಯನ್ನು ನೀಡುವುದು. ನಮ್ಮ ಟ್ರಸ್ಟಿನ ಉದ್ದೇಶವಾಗಿದೆ.