ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.

ಸಂಪರ್ಕ ಮಾಹಿತಿ
ಫೋನ್

+91 96117 19922

ಇಮೇಲ್

hrstrust9@gmail.com

ಸ್ಥಳ

ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122

img

ಗೋಅಶ್ರಮ

ಹಿಂದೂ ಧರ್ಮ ಮತ್ತು ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋಮಾತೆಗೆ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನವಿದೆ. ಗೋವನ್ನು ಹಿಂದೂಗಳು ತಾಯಿ ಎಂದು ಪೂಜಿಸುತ್ತಾರೆ.

ಗೋಮಾತೆಯಲ್ಲಿ 33 ಕೋಟಿ ದೇವತೆಗಳ ನೆಲೆಸಿದ್ದು ಬೇಡಿದ್ದನ್ನು ನೀಡುವ ಕಾಮಧೇನು ಮತ್ತು ಕಲ್ಪವೃಕ್ಷ ಎಂಬುದು ಹಿಂದುಗಳ ನಂಬಿಕೆ. ಗೋಮಾತೆಯು ಆಧ್ಯಾತ್ಮಿಕ ಮತ್ತು ಆರೋಗ್ಯದ ಮೂಲವಾಗಿದೆ. ಗೋಮಾತೆ ಹೈನುಗಾರಿಕೆಯ ಮೂಲಕ ಮನುಷ್ಯನ ಜೀವನದ ಎಲ್ಲ ಹಂತಗಳಲ್ಲೂ ಸಹಕಾರಿಯಾಗುತ್ತದೆ. ಗೋವಿಲ್ಲದೆ ನಮ್ಮ ಜೀವನವಿಲ್ಲ.

ಹೀಗಾಗಿ ನಮ್ಮನ್ನು ಜೀವನಪೂರ್ತಿ ಪೋಷಿಸುವ ಗೋವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಭಾರತೀಯ ಸಂಸ್ಕೃತಿ ಧರ್ಮ ಮತ್ತು ಆರ್ಥಿಕತೆಯಲ್ಲಿ ಅತ್ಯಂತ ಮಹತ್ವ ಪಾತ್ರ ವಹಿಸುತ್ತದೆ ಗೋವುಗಳನ್ನು ಸಂರಕ್ಷಿಸುವುದು ಗೋವುಗಳ ತಳಿಗಳನ್ನು ಅಭಿವೃದ್ಧಿ ಮಾಡುವುದು ಅಕ್ರಮ ಕಸಾಯಿಖಾನೆ ಸೇರುವುದನ್ನು ತಡೆಯುವುದು ಗೋಶಾಲೆಗಳನ್ನು ನಿರ್ಮಿಸುವುದು ನಮ್ಮ ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ನ ಪ್ರಮುಖ ಅಂಶವಾಗಿದೆ.

ಗೋವುಗಳ ಸಂರಕ್ಷಣೆಯು ಕೇವಲ ಒಂದು ಧರ್ಮದ ವಿಷಯವಲ್ಲ ಇದು ಪ್ರಾಣಿ ದಯೆ ಮತ್ತು ಪರಿಸರ ಸಮತೋಲನಕ್ಕಾಗಿ ಎಲ್ಲರ ಹೊಣೆಯಾಗಿದೆ.

ಗೋ ರಕ್ಷಣೆಗೆ ನಮ್ಮ ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ನಿಂದ ಕೈಗೊಂಡಿರುವ ಪ್ರಮುಖ ಕಾರ್ಯಗಳು.

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವ ಗೋವುಗಳನ್ನು ಪತ್ತೆಹಚ್ಚಿ ರಕ್ಷಿಸಿ ಅವುಗಳಿಗೆ ಆಶ್ರಯ ನೀಡುವುದು.

ಸ್ಥಳೀಯ ಗೋವುಗಳ ತಳಿಗಳನ್ನು ಸಂರಕ್ಷಣೆ ಮತ್ತು ಪೋಷಣೆಗೆ ಉತ್ತೇಜನ ನೀಡುವುದು.

ಬೇರೆ ಬೇರೆ ಸ್ಥಳಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸಿ ಗೋವುಗಳಿಗೆ ಆಶ್ರಯ ನೀಡುವುದು.

ಗೋವುಗಳ ಮಹತ್ವ ಮತ್ತು ಅವುಗಳ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಿ ಅರಿವು ಮೂಡಿಸುವುದು.

ಗೋವುಗಳ ಪೋಷಣೆ ಪಾಲನೆ ಮತ್ತು ಅವುಗಳ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಗೋವುಗಳ ರಕ್ಷಣೆ ಕೇವಲ ದೈಹಿಕವಾಗಿ ಅಲ್ಲ ಅದು ನಮ್ಮ ಸಂಸ್ಕೃತಿ, ಪರಂಪರೆಯ ಸಂರಕ್ಷಣೆಯೂ ಆಗಿದೆ.

img
img