ದಾನಿಗಳ ತೃಪ್ತಿಯನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ದತ್ತಿ ಪ್ರಯಾಣಗಳನ್ನು ಅಭಿವೃದ್ಧಿಪಡಿಸುವುದು ಸಮುದಾಯದ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಲೋಕೋಪಕಾರಿಯಿಂದ ನಮ್ಮ ಮಾನವೀಯತೆಯನ್ನು ವಿಸ್ತರಿಸುತ್ತದೆ.

ಸಂಪರ್ಕ ಮಾಹಿತಿ
ಫೋನ್

+91 96117 19922

ಇಮೇಲ್

hrstrust9@gmail.com

ಸ್ಥಳ

ಬೋರನಕೊಪ್ಪಲು ಅಣ್ಣನಾಯಕನಹಳ್ಳಿ (ಪೋಸ್ಟ್), ಅರಸೀಕೆರೆ(ತಾ) ಹಾಸನ (ಡಿ) ಕರ್ನಾಟಕ 573122

img

ಬಡ ಮಕ್ಕಳಿಗೆ ಶಿಕ್ಷಣ

ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್ ಸಮಾಜದ ಶಿಕ್ಷಣ ಇನ್ನೂ ಮರೀಚಿಕೆ ಎನಿಸಿರುವ, ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುವ ಮಹತ್ವದ ಕಾರ್ಯವನ್ನು ಕೈಗೊಳ್ಳುತ್ತಿದೆ.

ಬಡತನದ ಕಾರಣದಿಂದ ಅನೇಕ ಪ್ರತಿಭೆಗಳು ಅರಳದೇ ಉಳಿಯುತ್ತಿವೆ, ಇದರಿಂದ ನಿಜವಾದ ಪ್ರತಿಭೆಗಳು ಸಮಾಜದ ಮುಖ್ಯ ವಾಹಿನಿಗೆ ಬರಲಾಗದೆ ತಮ್ಮ ಆಸೆ - ಆಕಾಂಕ್ಷೆಗಳಿಂದ ಬಡವರು ವಿಮುಖರಾಗುತ್ತಿದ್ದಾರೆ ಎಂಬ ಅರಿವಿನಿಂದ, ಈ ಟ್ರಸ್ಟ್ ಶಿಕ್ಷಣ ನೆರವು, ವಿದ್ಯಾರ್ಥಿ ವೇತನ, ಪುಸ್ತಕಗಳು ಹಾಗೂ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಿದೆ.

ಟ್ರಸ್ಟ್‌ನ ಪ್ರಮುಖ ಆಶಯ ಜಾತಿ, ಮತ, ಪಂಥ ಎಂಬ ಭೇದ-ಭಾವಗಳನ್ನು ಮೀರಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು. “ಶಿಕ್ಷಣವೇ ಶಕ್ತಿಯ ಮೂಲ” ಎಂಬ ತತ್ವವನ್ನು ಆಧಾರವಾಗಿಸಿಕೊಂಡು, ಸಮಾಜದಲ್ಲಿ ಜ್ಞಾನ ಸಮಾನತೆ ತರಲು ಇದು ಪ್ರಯತ್ನಿಸುತ್ತದೆ.

ಇದರ ಜೊತೆಗೆ, ಅನಾಥಾಶ್ರಮಗಳಿಗೆ ಸಹಾಯ, ಆರೋಗ್ಯ ಶಿಬಿರ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನೂ ಟ್ರಸ್ಟ್ ಕೈಗೊಳ್ಳುತ್ತಿದೆ.

ಈ ರೀತಿಯ ಸೇವೆಗಳು ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಮಗ್ರ ಸಮಾಜದ ಅಭಿವೃದ್ಧಿಗೂ ದಾರಿ ಮಾಡಿಕೊಡುತ್ತವೆ. ಶಿಕ್ಷಣ ಪಡೆದ ಮಕ್ಕಳಿಂದ ಸಮಾಜದಲ್ಲಿ ಅರಿವು, ಹೊಣೆಗಾರಿಕೆ ಹಾಗೂ ಮಾನವೀಯತೆ ಹೆಚ್ಚುತ್ತದೆ. ಇದು ಭವಿಷ್ಯದ ಶ್ರೇಷ್ಠ ನಾಗರಿಕರನ್ನು ರೂಪಿಸಲು ಸುವರ್ಣವಕಾಶ ಕಲ್ಪಿಸುತ್ತದೆ. ಹೀಗಾಗಿ, ಹಿಂದೂ ರಾಷ್ಟ್ರೀಯ ಸೇವಾಶ್ರಮ ಟ್ರಸ್ಟ್‌ನ ಈ ಮಹತ್ವದ ಹೆಜ್ಜೆ ಭವಿಷ್ಯದ ಶ್ರೇಯೋಭಿವೃದ್ಧಿಗೆ ಬಲವಾದ ಅಸ್ತಿಭಾರವಾಗಲಿದೆ.

img
img